ಪ್ರಕೃತಿಯ ಈ ತೊಟ್ಟಿಲಲ್ಲಿ ನೆಲೆಸಿರುವ ಮಾನವನೆ,
ಮರೆಯದಿರು ನೀ ಈ ಪ್ರಕೃತಿಯಿಂದಲೇ ಪಡೆದ ಜ್ಞಾನವೆಂದು,
ಸ್ಪಷ್ಟವಾಗುವುದಿಲ್ಲಿ ತಾಯಿ-ಮಗುವಿನ ಸಂಬಂಧವಿದೆಯೆಂದು,
ಆ ಮಾತೆಯೇ ನಿನ್ನ ಪಾಪ ಪುಣ್ಯಗಳ ಹೊರುವಳೆಂದು.
ದೇಶ ದೇಶ ದೇಶ ಎಂದು ದೇಶ ಸೇವೆ ಮಾಡಿದೆ ನೀನು
ಸಾಹಿತ್ಯ ಕಲೆಯ ಬೆಳೆಸಿ ನೀ ಮೆರಗುಗೊಳಿಸಿದೆ ಪ್ರಕೃತಿಯನ್ನು,
ಮೆಚ್ಚಿದಳಾ ಪ್ರಕೃತಿ ನಿನ್ನ ಹಾಡು ಹೊಗಳಿಕೆಗೆ,
ಇದರಿಂದರಿವಾಗುವುದು ಆಕೆ ಸಹಿಸುವಳು ನಿನ್ನ ಸ್ವಾರ್ಥಪರತೆಯನ್ನು
ಆಕೆಯಿಂದ ಪಡೆದೆ ನೀ ಜೀವನಕ್ಕಾಗುವಷ್ಟೆಲ್ಲವನ್ನು
ನೀ ಮೇಲೇರಲು ಕಡೆಗಾಣಿಸಿದೆ, ನಾಶಕ್ಕೂ ಸಿದ್ಧವಾದೆ ಆಕೆಯನ್ನು
ಭೂಕಂಪ, ಪ್ರಳಯ, ಅತಿವೃಷ್ಟಿಯೆಂಬ ಎಚ್ಚರಿಕೆ ಬರಲು
ಸಿದ್ಧನಾದೆ ನೀ ಕಡಿಯಲು ತಾಯಿ ಮಗುವಿನ ಸಂಬಂಧವನ್ನು.
ಏಕೆ ಆಲೋಚಿಸುವೆ ಪ್ರಕೃತಿಯಿಂದೇನು ಪಡೆದೆ ನೀನೆಂದು
ಪ್ರಶ್ನಿಸಿಕೊ ನೀನೇನು ಮಾಡಿದೆ ಈ ಪ್ರಕೃತಿಗೆಂದು
ಪ್ರಕೃತಿ ತನ್ನ ಮಡಿಲಲ್ಲಿ ನಿನ್ನ ಹೊತ್ತು ತನ್ನನ್ನೇ ತಾ ತ್ಯಜಿಸಿದರೆ,
ನಿನಗೆಲ್ಲಿ ನೆಲೆಯಿದೆ ಯೋಚಿಸಿನ್ನು.
ಇನ್ನೆಷ್ಟು ಹೊರುವಳು ಆ ಮಾತೆ ನಿನ್ನ ಪಾಪವನ್ನು
ನೀನರಿಯೆ ಆಕೆಯ ಅಂತರಾತ್ಮವನ್ನು
ಪಶ್ಚತ್ತಾನವೆಂಬ ಬೆಂಕಿ ನಿನ್ನ ಬಳಿ ಬರುವುದರೊಳಗೆ
ಆ ತೊಟ್ಟಿಲು ಮುರಿದು ಕೆಳಗೆ ಬೀಳುವೆ ನೀ ಮರೆಯದಿರಿನ್ನು.
ಪ್ರೀತಿ ಕಲ್ಲಾದಾಗ, ನಂಬಿಕೆ ಮುಳ್ಳಾದಾಗ
ಕೈಗೆ ಸಿಕ್ಕಿದ್ದು ಬಾಯಿಗೆ ಬರದಾಗ
ಅರ್ಥವಾಗುವುದು ಪ್ರಕೃತಿ ಏನೆಂದು
ಅಕೆಯ ಬಗ್ಗೆ ನೀ ಯೋಚಿಸಿದಾಗ.
-ಅಕ್ಷತಾ ಕೊಠಾರಿ
‘कहते हैं ना हर आज का अपना एक कल होता है।’
आज इन्हीं पंक्तियों ने कुछ खुद में नए सपनों के सफलताओं को उजागर करने की चाह में आगे बढ़ गई। दोस्तों ऊपर की कही गई पंक्तियां आदर्श ग्राम,जो की कई सालों पुराने दशकों में ले जाकर एक अतीत को वर्तमान से जोड़ते हुए सपनों को जीने का आकार दिया है और उसे साकार करने में…
Chitthi aayi hai
If you’re reading this, I bet you still have a handwritten letter, handmade greeting card, a note or a memory gift wrapped in promises and joys that have stayed with you and are precious beyond words. Heartfelt gestures never go out of style and that is why 39 of us gathered one waning winter morning…
लिट्टी चोखा टू मिसल पाव
मैं बिहार राज्य के मधेपुरा जिला का निवासी हूँ।मैं ग्रामीण परिवेश से आता हूँ। मैं उस परिवर्तनकाल से गुजरा हूँ ,जहां समाजिक बदलाव को मैंने काफी नजदीक से महसूस किया है।मैंने बदलाव को देखा है । मैंने उस व्यवस्था को देखा है, जहां सरकारी स्कूल में नीचे बैठ कर पढ़ना हो ,चाहे सड़कें टूटी हुई…