Categories
PoemsByVolunteers

Time for Nature!!

By Chetan, Bangalore

ಪ್ರಕೃತಿಯ ಶಾಲೆಯಲ್ಲಿ ಪ್ರತಿಯೊಬ್ಬರೂ ವಿಧ್ಯಾರ್ಥಿಗಳೇ..


ದಿನ ದಿನವೂ ಹೊಸತೊಂದು ಪಾಠ, ನೋಡಿದಷ್ಟು ಮತ್ತೇ ಮತ್ತೇ ನೋಡಬೇಕೆನ್ನುವ ರಮ್ಯ ರಮಣೀಯ ನೋಟ..


ಮುಗಿಲು, ಬೆಟ್ಟಗುಡ್ಡ, ಜಲ ಝರಿಗಳ ಮೇಲೆ ಮೂಡಿದೆ ದೇವರ ಮುದ್ದಾದ ಅಕ್ಷರಮಾಲೆ..ಸದ್ದಿಲ್ಲದೇ ಸರ್ವರಿಗೂ ನೀಡಿದೆ ನಿಸರ್ಗದ ಮಡಿಲಿನಲ್ಲಿ ಕೂತು ಕಲಿಯುವ ಕರೆಯೋಲೆ‌‌..


ಕಲಿಯಬೇಕಿದೆ ಸಕಲ ಜೀವರಾಶಿಯೂ ವಿಶ್ವವಿದ್ಯೆಯನು ಮನಸಿಟ್ಟು, ಭೂದೇವಿಯ ಎದೆಯುಸಿರಿಗೆ ತಮ್ಮೆಲ್ಲರ ಕಿವಿಗೊಟ್ಟು! ಚೇತನ್

Leave a comment